logo

Monthly Archives: September 2020

ಚೈನಾ ಟೌನ್ ನಲ್ಲಿ ಚಿತ್ರಾನ್ನ ಸಿಗುತ್ತಾ?

ಚೈನಾ ಟೌನ್ ನಲ್ಲಿ ಚಿತ್ರಾನ್ನ ಸಿಗುತ್ತಾ?   ಇದೊಂಥರ ಎಲ್ಹೋದರೂ ಚೇಪಗೋಡಿನ ಚಿತ್ರಾನ್ನ ಹುಡುಕಿದ ಕಥೆ. ( ಚೇಪುಗೋಡು-ಶೃಂಗೇರಿ ಹತ್ತಿರದ ನನ್ನೂರು). ಹೇಳಿಕೊಳ್ಳುವಷ್ಟು ಅನ್ನಪ್ರಿಯಳೆನಲ್ಲದಿದ್ದರೂ, ಅದೇನೋ ಅಮ್ಮ ಮಾಡುವ ಸಿಂಪಲ್ ಒಗ್ಗರಣೆ ಚಿತ್ರಾನ್ನ ಅಂದರೆ ನಂಗೆ ಮೈಯ್ಯೆಲ್ಲಾ ಬಾಯಿ. ಇರಲಿ, ಈ ಚೈನಾಟೌನಿನ ಕಥೆ ಮೊದಲು ಹೇಳಿ ಬಿಡ್ತೀನಿ. ನಮ್ಮ ಮದುವೆ ಆಗಿ ದಶಮಾನೋತ್ಸವ ಆಚರಿಸುವ ಪ್ರಸ್ತಾಪ ನಮ್ಮಿಬ್ಬರ ದ್ವಿಸದಸ್ಯ ಮಂಡಳಿ ( ಅದೇ ಗಂಡ -ಹೆಂಡತಿ, ನಾನು -ಅವನು ಕಮಿಟಿ )ಮುಂದೆ ಬಂದಿತ್ತು. ( ಇನ್ನೇನು ಮತ್ತೆ, ಊರುಸುತ್ತೋಕೆ ಯಾವ ನೆವ ಆದ್ರೇನು ಅಲ್ವ?) ನಾವಿಬ್ರು ಎಷ್ಟು ಕಿತ್ತಾಡಿದ್ರೂ ಈ ವಿಶ್ಯದಲ್ಲಿ ಒಂದೇ. ಮಗಳನ್ನು ಬಿಟ್ ಹೋಗೋ ಪ್ಲಾನೂ ಇತ್ತು ಅನ್ನಿ . ಬಜೆಟ್ಟೂ, ಬಫೆಟ್ಟೂ ಎಲ್ಲಾ ಅಳೆದು ಸುರಿದು ಲೆಕ್ಕಹಾಕಿ […]